ಕಳಸ:ಪಟ್ಟಣದಲ್ಲಿ ಹೆಚ್ಚುತ್ತಿರುವ ಆಟೋಗಳ ನಿಲುಗಡೆಗೆ ಪ್ರತ್ಯೇಕ ನಿಲ್ದಾಣಗಳನ್ನು ಒದಗಿಸಬೇಕು ಎಂದು ಇಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಆಗರಹಿಸಿದೆ.
ಬಗ್ಗೆ ಕಳಸ ಗ್ರಾಮ ಪಂಚಾಯಿತಿ ಅಭಿವೇಋದ್ಧಿ ಅಧಿಕಾರಿ ಕವೀಶ್ ಅವರಿಗೆ ಸಂಘ ಮನವಿ ಸಲ್ಲಿಸಿದೆ.ಪಟ್ಟಣದಲ್ಲಿ ಈಗಾಗಲೇ ಆಟೋಗಳ ಸಂಖ್ಯೆ ಹೆಚ್ಚಿದ್ದು ಇನ್ನಷ್ಟು ಆಟೋಗಳು ಬರುತ್ತಿವೆ.ಆದರೆ ಈ ಆಟೋಗಳನನು ನಿಲ್ಲಿಸಲು ಕೂಡ ಸ್ಥಳ ಇಲ್ಲದೆ ತೊಂದರೆ ಆಗುತತಿದೆ.ರಸೆತ ಬದಿ ನಿಲ್ಲುವ ಆಟೊಗಳಿಂದ ವ್ಯಾಪಾರಿಗಳಿಗೆ ಮತ್ತು ನಾಗರೀಕರಿಗೂ ತೊಂದರೆ ಆಗುತ್ತಿದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಪಟ್ಟಣದಲ್ಲಿ ಈಗ 7 ಆಟೋ ನಿಲ್ದಾನಗಳು ಇದ್ದರೂ ಸ್ಥಳ ಕೊರತೆ ಆಗಿದೆ.ಇದರಿಂದ ಕೈಮರ, ಕೆ.ಕೆ.ಬಿ ಗ್ಯಾರೇಝ್ ಬಳಿ ಮತ್ತು ಹೆಚ್.ಪಿ.ಪೆಟ್ರೋಲ್ ಬಂಕ್ ಬಳಿ ಹೊಸದಾಗಿ ಆಟೋ ನಿಲ್ದಾಣ ನಿರ್ಮಿಸಬೇಕು ಎಂದು ಸಂಘವು ಒತ್ತಾಯಿಸಿದೆ.ಆಟೋ ಚಾಲಕರ ಸಂಘದ ಮಲ್ಲಿಕಾರ್ಜುನ್, ಜಗದೀಶ್ ಭಠ್, ಆನಂದ ಶೆಟ್ಟಿ, ಸುನಿಲ್. ಸಂತೋಷ್ ಭಾಗವಹಿಸಿದ್ದರು.
