ಕಳಸ:ಇಲ್ಲಿನ ಪ್ರಬೋಧಿನಿ ವಿದ್ಯಾಕೇಂದ್ರದ ಕಾರ್ಯದರ್ಶಿಯಾಗಿ 3 ದಶಕಕ್ಕೂ ಹೆಚ್ಚು ಕಾಲದಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಭಟ್ ಅವರಿಗೆ ಅಯೋಧ್ಯೆಯ 2025ರ ರಾಮೋತ್ಸವ ಸಂದರ್ಭದ ರಾಮಲಲ್ಲಾ ಪುರಸ್ಕಾರ ಸಂದಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ರಾಘವೇಂದ್ರ ಭಟ್ ಅವರ ಸಾಧನೆ ಮತ್ತು ಬದ್ಧತೆ ಪರಿಗಣಿಸಿ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ರಾಮಸೇವಾ ಪ್ರತಿಷ್ಟಾನ ತಿಳಿಸಿದೆ.
ಕಳೆದ 30 ವರ್ಷಗಳಿಂದ ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರವು ಸಾವಿರಾರು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕ್ರತಿ ಮತ್ತು ರಾಷ್ಟ್ರಪ್ರೇಮ ಮೈಗೂಡಿಸುವಲ್ಲಿ ಯಶಸ್ವಿಯಾಗಿದೆ.
ಈ ಶಾಲೆಯು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣವನ್ನೂ ನೀಡುತ್ತಾ ಕಳಸ ತಾಲ್ಲೂಕಿನ ಅಗ್ರಮಾನ್ಯ ಶಾಲೆಗಳಲ್ಲಿ ಮುಂಚೂಣಿಯಲ್ಲಿದೆ. ಮೂಲತಃ ವ್ಯಾಪಾರಿ ಆಗಿರುವ ರಾಘವೇಂದ್ರ ಭಟ್ ಪ್ರಬೋಧಿನಿ ಶಾಲೆಗಾಗಿ ತಮ್ಮ ಜೀವನದ ಬಹುಪಾಲು ಮುಡಿಪಾಗಿಟ್ಟಿದ್ದಾರೆ.
