ಕಳಸ:ಸಂಸೆ ಚಾವಡಿಯಲ್ಲಿರುವ ಅರಮನೆ ಬಸದಿಯ ಪುನರ್ ಪ್ರತಿಷ್ಟಾಪನೆಗೆ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಭಾನುವಾರ ಚಾಲನೆ ನೀಡಿದರು.
ಸಂಸೆ ಮೂರ್ನಾಡು ಗ್ರಾಮದ ಧಾರ್ಮಿಕರ ಮುಖಂಡರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.ಶಿಥಿಲಗೊಂಡಿರುವ ಈಗಿನ ಬಸದಿಗೆ ಪರ್ಯಾಯವಾಗಿ ನೂತನ ಬಸದಿ ನಿರ್ಮಾಣ ಆಗಲಿದೆ. ಚಾವಡಿ ಸುದರ್ಶನ ಶೆಟ್ಟರು, ಜಂಬೂರು ಬ್ರಹ್ಮದೇವಯ್ಯ, ಶ್ರೀಪಾಲಯ್ಯ, ಕೀರ್ತಿ ಜೈನ್, ರಾಜೇಂದ್ರ ಕುಮಾರ್,ಕೊಡಿಗೆ ಸುರೇಂದ್ರ ಕುಮಾರ್, ಸನ್ಮತಿ, ಶಾಂತಿ ಪ್ರಸಾದ್, ಮಾಣಿಕ್ಯರಾಜ್, ಕೆ.ಜೆ.ಧರಣೇಂದ್ರ, ಗುರಿಕಾರರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಹರ್ಷೇಂದ್ರ ಕುಮಾರ್ ಮಲ್ಲೇಶ್ವರ ಸಂಸೆ ಮೂರ್ನಾಡು ರಾಜದೈವ ಮೂಲಸ್ಥಾನ, ಚಂದ್ರನಾಥ ಸ್ವಾಮಿ ಬಸದಿ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಹಿಂಬಡಿ ಭಂಡಾರದ ಮನೆಗೆ ಭೇಟಿ ನೀಡಿದರು.ಆನಂತರ ಜಂಬೂರು ಪದ್ಮಾವತಿ ಅಮ್ಮವನರ ದೇವಸ್ಥಾನಕ್ಕೂ ತೆರಳಿ ದೇವಿಯ ದರ್ಶನ ಪಡೆದರು.
\
