ಕಳಸ:ಕಳಸ ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರಾಗಿದ್ದ ಹಿರೇಬೈಲ್ ಕಿತ್ಲೆಕೊಂಡದ ಆದರ್ಶ(37) ಬುಧವಾರ ನಿಧನರಾಗಿದ್ದಾರೆ.
ಹೃದಯಾಘಾತದಿಂದ ನಿಧನರಾದ ಅವರಿಗೆ ತಂದೆ, ತಾಯಿ, ಪತ್ನಿ ಮತ್ತು ಒಂದು ವರ್ಷದ ಮಗ ಇದ್ದಾರೆ.
ಕಾಂಗ್ರೆಸ್ ಪಕ್ಷದ ಹಿರೇಬೈಲ್ ಬೂತ್ ಅಧ್ಯಕ್ಷರಾಗಿದ್ದ ಅವರ ಸಾವಿಗೆ ಕಳಸ ಬ್ಲಾಕ್ ಕಾಂಗ್ರೆಸ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರಿಗೆ ಅಂತಿಮ ನಮನ ಸಲ್ಲಿಸಿದರು.
