ಕಳಸ:ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಸಾಲಿನಿಂದ ಬಿಸಿಎ ತರಗತಿಗೆ ಪ್ರವೇಶ ಆರಂಭವಾಗಿದೆ.
ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೂರು ವರ್ಷದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ತರಗತಿಗೆ ಪ್ರವೇಶ ಪಡೆಯಬಹುದು ಎಂದು ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ಬಹುಬೇಡಿಕೆ ಪಡೆದಿರುವ ಈ ತರಗತಿಗೆ ಕಳಸ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ಪ್ರವೇಶ ಪಡೆಯಲು ಇದರಿಂದ ಅನುಕೂಲ ಆಗಿದೆ. ಈ ವ್ಯಾಸಂಗ ಮಾಡಿದವರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಕಾಲೇಜಿನಲ್ಲಿ ಬಿ.ಎ. ಮತ್ತು ಬಿ.ಕಾಂ. ಪದವಿಗೆ ಕೂಡ ಪ್ರವೇಶ ಲಭ್ಯವಿದೆ. ಆಸಕ್ತರು ಪ್ರಾಂಶುಪಾಲರನ್ನು 9844247398 ಮೂಲಕ ಸಂಪರ್ಕಿಸಬಹುದು.
