ಕಳಸ:ಕರ್ನಾಟಕ ಜಾನಪದ ಪರಿಷತ್ತಿನ ಆಶ್ರಯದಲ್ಲಿ ಪಟ್ಟಣದಲ್ಲಿ ಸೋಮವಾರ ಜಾನಪದ ತಜ್ಞ ಹೆಚ್.ಎಲ್. ನಾಗೇಗೌಡರ ಬದುಕು ಬರಹದ ಬಗ್ಗೆ ವಿಚಾರ ಸಂಕಿರಣ ನಡೆಯಿತು.
ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಆಗುಂಬೆ ಗಣೇಶ್ ಹೆಗ್ಗಡೆ ಪ್ರಧಾನ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕಳಸ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ರಜಿತ್ ಕೆಳಗೂರು ಅಧ್ಯಕ್ಷರಾಗಿ, ಮೋಹನ್ ರಾಜಣ್ಣ ಗೌರವಾಧ್ಯಕ್ಷರಾಗಿ ಆಯ್ಕೆಯಾದರು.ಪ್ರಶಾಂತ್ ಹೆಚ್.ಆರ್. ಪ್ರಧಾನ ಕಾರ್ಯದರ್ಶಿಯಾಗಿ, ವಿನಯ ಕುಮಾರ್ ಶೆಟ್ಟಿ ಗೌರ ಸಲಹೆಗಾರರಾಗಿ ಅಧಿಕಾರ ಸ್ವೀಕರಿಸಿದರು.ಸರ್ವಜಿತ್, ಮೊಹಮ್ಮದ್ ಶಮೀರ್,ಸುನೀಲ್ ಮಸಿಗದ್ದೆ ಉಪಾಧ್ಯಕ್ಷರಾಗಿ, ಚಿಂತನ್ ಗೌಡ, ಕಾಂತಿ ಪೈ ಸಹ ಕಾರ್ಯದರ್ಶಿಯಾಗಿ, ಆಶಾ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.

ನಿಖಿತಾ, ಗಣೇಶ್, ಪ್ರಿಯಾ, ನಗೀನ, ಪೂರ್ಣಿಮಾ ಸಂಚಾಲಕರಾಗಿ ಮತ್ತು ಉದಯ್ ಮಾರ್ಗದರ್ಶಕರಾಗಿ ಆಯ್ಕೆಯಾದರು.ನಾಟಿ ವೈದ್ಯ ಕೃಷ್ಣಮೂರ್ತಿ ಜೋಯಿಸ್ ಅವರನ್ನು ಸನ್ಮಾನಿಸಲಾಯಿತು.
ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು.ಸತೀಶ್ ಚಂದ್ರ, ಕೆ.ಕೆ.ಬಾಲಕೃಷ್ಣ ಭಟ್, ರಾಜೇಂದ್ರ ಹಿತ್ತಲಮಕ್ಕಿ, ಮಮ್ತಾಜ್ ಬೇಗಂ, ಕೌಸ್ತುಭ ಎಂ. ಭಟ್, ಶೇಖರ ಶೆಟ್ಟಿ ಭಾಗವಹಿಸಿದ್ದರು.
ಚೊಚ್ಚಲ ಮೋಟರ್ ರಾಲಿ ಪ್ರಶಸ್ತಿ ಜಯಿಸಿದ ಶ್ರೀಲಕ್ಷ್ಮಿ ಜೋಷಿ-ಶ್ರೀದೇವಿ ಜೋಷಿ
