ಕಳಸ:ಇಲ್ಲಿನ ರಾಲಿ ಪಟು ಗಿರಿಜಾಶಂಕರ ಜೋಷಿ ಅವರ ಪುತ್ರಿಯರಾದ ಶ್ರೀಲಕ್ಷ್ಮಿ ಜೋಷಿ ಮತ್ತು ಶ್ರೀದೇವಿ ಜೋಷಿ ಮೋಟರ್
ರಾಲಿಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸುವ ಮೂಲಕ ತಮ್ಮ ತಂದೆಯ ಹಾದಿ ತುಳಿದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಟಿಎಸ್ಡಿ ರಾಲಿ ಚಾಂಪಿಯನ್ಶಿಪ್ನ ಮಹಿಳಾ ವಿಭಾಗದಲ್ಲಿ ಈ ಜೋಷಿ ಅಗ್ರಸ್ಥಾನದ ಜೊತೆಗೆ ಪ್ರಶಸ್ತಿ ಜಯಿಸಿದೆ. ತಮ್ಮ ಚೊಚ್ಚಲ ರೇಸ್ನಲ್ಲೇ ಈ ಜೋಡಿ ಪ್ರಶಸ್ತಿ ಜಯಿಸಿದ್ದು ವಿಶೇಷವಾಗಿದೆ.

ಚಿಕ್ಕಮಗಳೂರು ಮೋಟರ್ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ರಾಲಿಯಲ್ಲಿ ಪಾದಾರ್ಪಣೆ ಮಾಡಿದ ಎಲ್ಲರ ಪೈಕಿ ಅವರು ಎರಡನೇ ಸ್ಥಾನ ಪಡೆದ ಹೆಗ್ಗಳಿಕೆ ಸಾಧಿಸಿದರು.
ಒಟ್ಟು 125 ಕಿ.ಮೀ ದೂರದ ಈ ರಾಲಿ ಯಲ್ಲಿ 26 ಸಮಯ ನಿಯಂತ್ರಣ ಅವಧಿಗಳು ಇದ್ದವು.ತಮ್ಮ ತಂದೆಯ ಮಹಿಂದ್ರಾ ಥಾರ್ ನಲ್ಲಿ ಸ್ಪರ್ಧಿಸಿದ ಅವರು ಒಟ್ಟಾರೆ 36 ಸ್ಫರ್ಧಿಗಳ ಪೈಕಿ 13ನೇ ಸ್ಥಾನ ಗಳಿಸಿದರು.

ನಾನು ಪಾಲ್ಗೊಂಡ ಮೊದಲ ರಾಲಿ ಯಲ್ಲಿ ಮೂರನೇ ಸ್ಥಾನ ಗಳಿಸಿದ್ದೆ.ಆದರೆ ನನ್ನ ಮಕ್ಕಳು ತಮ್ಮ ಮೊದಲ ಯತ್ನದಲ್ಲೇ ಅಗ್ರಸ್ಥಾನ ಗಳಿಸಿದ್ದಾರೆ. ಈ ಸಾಧನೆ ಮಾಡಿರುವುದು ನಮೆಗಲ್ಲ ಖುಷಿ ತಂದಿದೆ ಎಂದು ಅವರ ತಂದೆ ಗಿರಿಜಾಶಂಕರ್ ಜೋಷಿ ತಿಳಿಸಿದ್ದಾರೆ.
ಶ್ರೀಲಕ್ಷ್ಮಿ ಜೋಷಿ ಮತ್ತು ಶ್ರೀದೇವಿ ಜೋಷಿ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮಿ ಜೋಷಿ ಅವರ ಮೊಮ್ಮಕ್ಕಳೂ ಆಗಿದ್ದಾರೆ.
