ರವಿ ಕೆಳಂಗಡಿ
ಕಳಸ:ಕಾಫಿ ಬೆಲೆಯ ಇತಿಹಾಸದಲ್ಲೇ ರೊಬಸ್ಟಾ ಕಾಫಿಯು ಗರಿಷ್ಟ ಪ್ರಮಾಣದ ಧಾರಣೆ ಪಡೆಯುತ್ತಿದೆ.
ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಪ್ರತಿ ಟನ್ಗೆ 3790 ಡಾಲರ್ಗೆ ಏರಿಕೆ ಆಗಿದೆ.ಇದು ಸಾರ್ವಕಾಲಿಕ ದಾಖಲೆ ಆಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಪೌಂಡ್ ಅರೇಬಿಕಾ ಬೆಲೆ 271 ಸೆಂಟ್ಸ್ಗೆ ಏರಿಕೆ ಆಗಿದೆ.ಇದು ಕಳೆದ 6 ತಿಂಗಳಲ್ಲೇ ಗರಿಷ್ಟ ಬೆಲೆ ಆಗಿದೆ.
ಈ ಬೆಲೆ ಏರಿಕೆಯಿಂದಾಗಿ ರೊಬಸ್ಟಾ ಕಾಫಿ ಬೇಳೆ ಬೆಲೆ ಕೆಜಿಗೆ 370 ರೂಪಾಯಿಗೆ ಏರಿದೆ. ಅರೇಬಿಕಾ ಕಾಫಿ ಕೂಡ ಕೆಜಿಗೆ 320 ರೂಪಾಯಿಗೆ ತಲುಪಿದೆ.
ಗರಿಷ್ಟ ರೊಬಸ್ಟಾ ಕಾಫಿ ಉತ್ಪಾದನೆ ಮಾಡುವ ವಿಯೆಟ್ನಾಂ ದೇಶದಲ್ಲಿ ಒಣ ಹವೆಯಿಂದ ಉತ್ಪಾದನೆ ಕುಸಿದಿದೆ.ಈಗಾಗಲೇ ಈ ಸಾಲಿನಲ್ಲಿ ಶೇ.20ಕ್ಕೂ ಹೆಚ್ಚು ಪ್ರಮಾಣದಲ್ಲಿ ರೊಬಸ್ಟಾ ಉತ್ಪಾದನೆ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ರೊಬಸ್ಟಾ ಕಾಫಿಗೆ ಜಾಗತಿಕ ಬೇಡಿಕೆ ಕುದುರಿದೆ.
ಅತ್ಯಧಿಕ ಅರೇಬಿಕಾ ಕಾಫಿ ಬೆಳೆಯುವ ಬ್ರಿಜಿಲ್ ದೇಶದಲ್ಲೂ ಕೂಡ ಹೆಚ್ಚಿನ ಮಳೆಯಿಂದ ಅರೇಬಿಕಾ ಕಾಫಿಗೆ ಹಾನಿ ಆಗುತ್ತಿದೆ.ಇದರಿಂದ ಮುಂದಿನ ಫಸಲು ಕಡಿಮೆ ಆಗುವ ಆತಂಕ ಇದೆ.ಪರಿಣಾಮವಾಗಿ ಅರೇಬಿಕಾ ಬೆಲೆ ಕೂಡ ಏರುತ್ತಲೇ ಇದೆ.
