ಕಳಸ:ಇಲ್ಲಿನ ರೋಟರಿ ಕ್ಲಬ್, ಶಿವಮೊಗ್ಗದ ಮಿಡ್ ಟೌನ್ ಚಾರಿಟಿ ಫೌಂಡೇಶನ್ ಮತ್ತು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಪಟ್ಟಣದಲ್ಲಿ ಉಚಿತವಾಗಿ ಹೃದಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಸಲಾಯಿತು.
ಮ್ಯಾಕ್ಸ್ ಆಸ್ಪತ್ರೆಯ ಹೃದಯ ತಜ್ಞ ಡಾ.ಸುಧೀರ್ ಭಟ್ ಮತ್ತು ತಂಡವು 65 ಜನರ ಹೃದಯ ತಪಾಸಣೆ ನಡೆಸಿ ಅಗತ್ಯ ಸಲಹೆ ನೀಡಿತು.

ರೋಟರಿ ಮಿಡ್ ಟೌನ್ ಸಂಸ್ಥೆಯು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 30 ಜನರು ರಕ್ತದಾನ ಮಾಡಿದರು.ರೋಟರಿ ಅಧ್ಯಕ್ಷೆ ಸಾವಿತ್ರಿ ಜೋಷಿ, ಕಾರ್ಯದರ್ಶಿ ಪಣೀಶ್, ಡಾ.ಸುಧೀರ್ ಅಂಬಟ್, ಡಾ.ವಿವೇಕ್ ಉಡುಪ ಭಾಗವಹಿಸಿದ್ದರು.
