ಕಳಸ:ಸಂಸೆ ಗ್ರಾಮದ ಬಾಳಗಲ್ ಪ್ರದೇಶದ ಹೊಸಮಠದ ನಿವಾಸಿಯಾಗಿದ್ದ 74 ವರ್ಷ ವಯಸ್ಸಿನ ಕೃಷ್ಣೇಗೌಡ ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದಾರೆ.
ಕಳಸಕ್ಕೆ ಜೀಪಿನಲ್ಲಿ ಬಂದಿದ್ದ ಅವರು ಆನಂತರ ಮರಳಿ ಊರಿಗೆ ಬಂದಿಲ್ಲ.ಕಳಸ ತಾಲ್ಲೂಕಿನ ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಅವರ ಕುಟುಂಬಸ್ಥರು ಕುದುರೆಮುಖ ಪೊಲೀಸರಿಗೆ ದೂರು ನೀಡಿದ್ದಾರೆ. 5.2 ಅಡಿ ಎತ್ತರದ ಇವರು ಕನ್ನಡ ಮಾತನಾಡುತ್ತಾರೆ. ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಇವರ ಬಗ್ಗೆ ಮಾಹಿತಿ ಸಿಕ್ಕರೆ ಅವರ ಮಗ ಅಶೋಕ್ ಅವರನ್ನು 8660779327 ಮೂಲಕ ಮಾಹಿತಿ ನೀಡಲು ಕೋರಲಾಗಿದೆ.
