ಕಳಸ:ತಾಲ್ಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿವೆ ಎಂಬ ದೂರಿನ ಬೆನ್ನಲ್ಲೇ ಶಾಸಕಿ ನಯನಾ ಮೋಟಮ್ಮ ಬುಧವಾರ ಕೆಲ ಪ್ರಮುಖ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.
ಮೊದಲಿಗೆ ಸಂಸೆ-ಎಳನೀರು ರಸ್ತೆ ದುರಸ್ತಿಯ 80 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕಿ ಚಾಲನೆ ನೀಡಿದರು. ಆನಂತರ ನೆಲ್ಲಿಬೀಡು ಸೇತುವೆಗೆ ಕೂಡ ಶಾಸಕಿ ಗುದ್ದಲಿಪೂಜೆ ನೆರವೇರಿಸಿದರು. 2.5 ಕೋಟಿ ವೆಚ್ಚದ ಈ ಕಾಮಗಾರಿ ಬಗ್ಗೆ ಸ್ಥಳೀಯರು ಅನೇಕ ವರ್ಷಗಳಿಂದ ನಿರೀಕ್ಷೆ ಹೊಂದಿದ್ದರು. ಆದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಅಲ್ಲಿ ನೆರೆದು ಶಾಸಕಿಯನ್ನು ಅಭಿನಂದಿಸಿದರು.

ಆನಂತರ ಕಳಸ-ಕೊಟ್ಟಿಗೆಹಾರ ರಸ್ತೆಯ ಹಿರೇಬೈಲಿನಿಂದ ಮರಸಣಿಗೆ ರಸ್ತೆಯ 2 ಕೋಟಿ ವೆಚ್ಚದ ಕಾಮಗಾರಿಗೂ ಶಾಸಕಿ ಹಸಿರು ನಿಶಾನೆ ತೋರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಮುಖಂಡರಾದ ಪ್ರಭಾಕರ್, ರಾಜೇಂದ್ರ, ರಫೀಕ್, ವೀರೇಂದ್ರ, ಶ್ರೀಪಾಲಯ್ಯ, ಜಯಂತ್, ಶುಕೂರ್ ಭಾಗವಹಿಸಿದ್ದರು.
