ಕಳಸ:ಇಲ್ಲಿನ ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘವು ಕಚಗಾನೆಯಲ್ಲಿ 2 ಟನ್ ಸಾಮಥ್ರ್ಯದ ಡ್ರೈಯರ್ ಅಳವಡಿಸಿದೆ.ಇದು ಬೆಳೆಗಾರರಿಗೆ ವರದಾನ ಆಗುವ ಎಲ್ಲ ಲಕ್ಷಣ ಇದೆ.
28.32 ಲಕ್ಷ ರೂಪಾಯಿ ವೆಚ್ಚದ ಈ ಘಟಕವನ್ನು ಮಂಗಳವಾರ ಅಳವಡಿಸಲಾಗಿದೆ.ಇದು ದಿನಕ್ಕೆ 2 ಟನ್ ಅಡಿಕೆಯನ್ನು ಒಣಗಿಸುವ ಸಾಮಥ್ರ್ಯ ಹೊಂದಿದೆ. ವಿದ್ಯುತ್ ಬಳಕೆ ಮಾಡಿಕೊಂಡು ಬಿಸಿ ಗಾಳಿ ಮೂಲಕ ಈ ಘಟಕವು ಬೇಯಸಿದ ಅಡಿಕೆಯನ್ನು 24 ಗಂಟೆಯಲ್ಲೇ ಒಣಗಿಸಲಿದೆ ಎಂದು ಸಂಘದ ಕಾರ್ಯನಿರ್ವಹಣಾಧಿಕಾರಿ ಮಹಬಲೇಶ್ವರ ತಿಳಿಸಿದ್ದಾರೆ.

ಮಳೆಗಾಲದ ಅಂತ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮೋಡದ ವಾತಾವರಣ ಇದ್ದಾಗ ಅಡಿಕೆ ಸಂಸ್ಕರಣೆ ಮಾಡಲು ತೊಂದರೆ ಆಗುತ್ತಿತ್ತು. ಬೆಳೆಗಾರರಿಗೆ ನಷ್ಟವೂ ಆಗುತ್ತಿತ್ತು. ಈ ಡ್ರೈಯರ್ ಬಳಸಿ ಸಕಾಲದಲ್ಲಿ ಅಡಿಕೆ ಒಣಗಿಸಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಅಡಿಕೆ ಸುಲಿಯುವ, ಸಂಸ್ಕರಣೆ ಮಾಡುವ ಮತ್ತು ಬೇಯಿಸುವ ಘಟಕ ಈಗಾಗಲೇ ಕಚಗಾನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದಕ್ಕೆ ಪೂರಕವಾಗಿ ಡ್ರೈಯರ್ ಕೂಡ ಅಳವಡಿಸಿರುವುದು ಬೆಳೆಗಾರರಿಗೆ ವರದಾನ ಆಗಲಿದೆ ಎಂಬುದು ಸಂಘದ ಅಧ್ಯಕ್ಷ ಮಂಜಪ್ಪಯ್ಯ ಅಭಿಪ್ರಾಯ.
