ಕಳಸ:ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಬಿಎಸ್ಎಫ್ ಯೋಧ ಬಿ.ಟಿ.ರಾಜಪ್ಪ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು.
ಮರಸಣಿಗೆ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ತಿಂಗಳ ಗೌರವಧನವಾದ 10 ಸಾವಿರ ರೂಪಾಯಿಯನ್ನು ರಾಜಪ್ಪ ಅವರಿಗೆ ಅರ್ಪಿಸಿ ಗೌರವ ಸಲ್ಲಿಸಿದರು. ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಮೋಹನ್, ಸದಸ್ಯರಾದ ವಿಶ್ವನಾಥ್, ವಿಜಯ ಗೌಡ, ವಿನ್ಸೆಂಟ್, ವಿಶಾಲಾಕ್ಷಿ, ಗುಲಾಬಿ, ಪೌಲಿನ, ಪಿಡಿಓ ಸುಪ್ರಿಯಾ, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಯೋಧ ರಾಜಪ್ಪ ಮಾತನಾಡಿ, ಮರಸಣಿಗೆ ಪಂಚಾಯಿತಿಯ ಸನ್ಮಾನಕ್ಕೆ ಕೃತಜ್ಷತೆ ಸಲ್ಲಿಸಿದರು.
