ಕಳಸ:ಇಲ್ಲಿನ ಕೆಪಿಎಸ್ ಶಾಲೆಯ ಸಾಧನೆಯ ಕಿರೀಟಕ್ಕೆ ಇಂದು ಇನ್ನೊಂದು ಗರಿ ಮೂಡಿದೆ.ಇಲ್ಲಿನ 10 ತರಗತಿಯ ವಿದ್ಯಾರ್ಥಿ ಶಿವಾನಂದ್ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತನ್ನ ವಿಜ್ಞಾನ ಮಾದರಿಗೆ ಮೂರನೇ ಸ್ಥಾನ ಗಳಿಸಿದ ಹೆಗ್ಗಳಿಕೆ ಸಾಧಿಸಿದ್ದಾರೆ.
10ನೇ ತರಗತಿಯ ಶಿವಾನಂದ್ ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಬಹುಮಾನ ಗಳಿಸಿ ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆ ಆಗಿದ್ದರು.ತೆಲಂಗಾಣದಲ್ಲಿ ಶುಕ್ರವಾರ ಮುಕ್ತಾಯವಾದ ವಿಜ್ಞಾನ ಮೇಳದಲ್ಲಿ ಅವರು ಪ್ರದರ್ಶಿಸಿದ ಮಾದರಿ ಮೂರನೇ ಸ್ಥಾನ ಗಳಿಸಿದೆ.
ಕಾಳುಮೆಣಸಿನ ಫಸಲು ಕೊಯ್ಯುವ ಸಾಧನವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸುವ ಮಾದರಿಯನ್ನು ಶಿವಾನಂದ್ ಪ್ರದರ್ಶಿಸಿ ವಿವರಣೆ ನೀಡಿದ್ದರು. ಕಳಸ ಕೆಪಿಎಸ್ ಶಾಲೆಯ ಅಟಲ್ಜೀ ಪ್ರಯೋಗಾಲಯದ ಮಾರ್ಗದರ್ಶಕ ಸಂದೇಶ್ ನೆರವಿನೊಂದಿಗೆ ಶಿವಾನಂದ್ ಮಾದರಿ ಅಭಿವೃದ್ಧಿಪಡಿಸಿದ್ದರು.
ಶಿವಾನಂದ್ ಮತ್ತು ಶಿಕ್ಷಕ ಸಂದೇಶ್ ಸಾಧನೆಗೆ ಕಳಸದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
