ಕಳಸ:ಪಟ್ಟಣದ ಜೆಇಎಂ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಸಿದ್ಧಾಂತ್ ಪ್ರಭು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆ ಆಗಿದ್ದಾನೆ.
ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ೧೪ ವರ್ಷದ ಒಳಗಿನ ವಯೋಮಾನದವರ ಸ್ಪರ್ಧೆಯಲ್ಲಿ ಸಿದ್ಧಾಂತ್ ಶ್ರೇಷ್ಟ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾನೆ .
ಸಿದ್ಧಾಂತ್ ಪ್ರಭು ಕಳಸದ ವೈದ್ಯ ದಂಪತಿಯಾದ ವಿಕ್ರಮ್ ಪ್ರಭು, ಮಾಳವಿಕ ಪ್ರಭು ಅವರ ಪುತ್ರ.
