ಕಳಸ:ಪಟ್ಟಣದಲ್ಲಿ ಶುಕ್ರವಾರ ನಡೆದ ಕಾವೇರಿ ನದಿ ನೀರಿನ ಹೋರಾಟದ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ಕನ್ನಡ ರಾಜು ಕೈ ನರ ಕತ್ತರಿಸಿಕೊಂಡು ಗಮನ ಸೆಳೆದರು.
ಮುಖ್ಯ ರಸ್ತೆಯಲ್ಲಿ ನಡೆದ ಮೆರವಣಿಗೆಯ ನಂತರ ತಾಲ್ಲೂಕು ಕಚೇರಿ ಬಳಿ ಪ್ರತಿಭಟನಾಕಾರರು ಜಮಾಯಿಸಿದರು.ಆಗ ಇದ್ದಕ್ಕಿದ್ದಂತೆ ಜೇಬಿನಿಂದ ಬ್ಲೇಡ್ ಹೊರತೆಗೆದ ಡಾ.ರಾಜ್ ಕುಮಾರ್ ಕಟ್ಟಾ ಅಭಿಮಾನಿ ರಾಜು ತಮ್ಮ ಕೈಯ ನರ ಕತ್ತರಿಸಿಕೊಂಡರು. ಕೈಯಿಂದ ರಕ್ತ ಸುರಿಯತೊಡಗಿದಾಗ, ‘ರಕ್ತ ಕೊಡುತ್ತೇವೆ, ಕಾವೇರಿ ನೀರು ಕೊಡುವುದಿಲ್ಲ’ ಎಂದು ಘೋಷಣೆ ಹಾಕಿದರು.

ಸ್ಥಳದಲ್ಲೇ ಇದ್ದ ಕಳಸ ಠಾಣಾಧಿಕಾರಿ ನಿತ್ಯಾನಂದ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ಕೂಡಲೇ ರಾಜು ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.ಅಲ್ಲಿ ರಾಜು ಕೈಗೆ ಹೊಲಿಗೆ ಹಾಕಿದ ನಂತರ ರಕ್ತಸ್ರಾವ ನಿಂತಿತು.
ಕರ್ನಾಟಕ ರಕ್ಷಣಾ ವೇದಿಕೆ, ಡಾ.ರಾಜ್ ಕನ್ನಡ ಸಂಘ, ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
