ಕಳಸ:ಕಳಸ-ಹೊರನಾಡು ನಡುವಿನ ಹೆಬ್ಬೊಳೆಯ ಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕರೊಬ್ಬರು ಮಂಗಳವಾರ ಮರಣ ಹೊಂದಿದ್ದಾರೆ.
ಹೊರನಾಡಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮೂವರು ಯುವಕರ ತಂಡ ಮಂಗಳವಾರ ಬೆಂಗಳೂರಿಗೆ ವಾಪಸ್ ಹೊರಟಿತ್ತು. ಹೆಬ್ಬೊಳೆಯಲ್ಲಿ ಭದ್ರಾ ನದಿಯ ಆಕರ್ಷಣೆಯಿಂದ ಸ್ನಾನ ಮಾಡಲು ಯುವಕರು ಇಳಿದಿದ್ದಾರೆ.
ಆಗ ಶ್ರೀನಗರದ ಯುವಕ ಗೋಕುಲ್ (೨೫) ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ.ಗೆಳಯರು ಅವರನ್ನು ರಕ್ಷಿಸುವ ಯತ್ನ ಫಲ ನೀಡಿಲ್ಲ.
ಕಳಸ ಠಾಣಾಧಿಕಾರಿ ನಿತ್ಯಾನಂದ ಅವರಿಗೆ ಸುದ್ದಿ ಮುಟ್ಟಿಸಿದ ನಂತರ ೧೧೨ ಪೊಲೀಸ್ ವಾಹನದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ.ಪೊಲೀಸ್ ಸಿಬ್ಬಂದಿ ಗೋಕುಲ್ ಅವರ ಶವ ಪತ್ತೆ ಮಾಡಿದ್ದಾರೆ.
