ಕಳಸ:ಕಳೆದ ೩ ವರ್ಷಗಳಿಂದ ಸ್ಥಗಿತವಾಗಿದ್ದ ಬಾಳೆಹೊಳೆ ಭದ್ರಾ ನದಿ ರ್ಯಾಫ್ಟಿಂಗ್ ಸೋಮವಾರದಿಂದ ಮತ್ತೆ ಆರಂಭವಾಯಿತು.
ಮೂರು ವರ್ಷದ ಹಿಂದೆ ಕೋವಿಡ್ ಸೋಂಕಿನ ಕಾರಣಕ್ಕೆ ರ್ಯಾಫ್ಟಿಂಗ್ ನಿಂತು ಹೋಗಿತ್ತು. ಆನಂತರ ಕಾನೂನಿನ ತೊಡಕಿನ ಕಾರಣಕ್ಕೆ ೩ ವರ್ಷಗಳಿಂದ ರ್ಯಾಫ್ಟಿಂಗ್ ಸ್ಥಗಿತವಾಗಿತ್ತು.ಇದರಿಂದ ಸಾಹಸಪ್ರಿಯರಿಗೆ ನಿರಾಸೆ ಮತ್ತು ಪ್ರವಾಸೋದ್ಯಮಕ್ಕೆ ಹಿನ್ನಡೆ ಆಗಿತ್ತು.

ಇದೀಗ ರ್ಯಾಫ್ಟಿಂಗ್ ಆರಂಭಕ್ಕೆ ಇದ್ದ ಎಲ್ಲ ತೊಡಕುಗಳ ನಿವಾರಣೆ ನಂತರ ಈ ಸಾಹಸ ಕ್ರೀಡೆ ಪುನರ್ ಆರಂಭಿಸಲಾಗಿದೆ.ಶಾಸಕಿ ನಯನಾ ಮೋಟಮ್ಮ ಸೋಮವಾರ ರ್ಯಾಫ್ಟಿಂಗ್ ಸಾಹಸವನ್ನು ಉದ್ಘಾಟಿಸಿದರ.ಆನಂತರ ಅವರು ಕಾಂಗ್ರೆಸ್ ಮುಖಂಡರ ಮತ್ತು ಸ್ಥಳೀಯರ ಜೊತೆ ಸ್ವತಃ ರ್ಯಾಫ್ಟಿಂಗ್ ಅನುಭವ ಪಡೆದರು.
ಕಾಂಗ್ರೆಸ್ ಮುಖಂಡರಾದ ಕೆ.ಆರ್. ಪ್ರಭಾಕರ್, ಹಿತ್ತಲಮಕ್ಕಿ ರಾಜೇಂದ್ರ, ಏಸ್ ಪ್ಯಾಡ್ಲರ್ ಸಂಸ್ಥೆಯ ಮಂಜುನಾಥ್, ಸೌಮ್ಯ, ಕಳಸ ಠಾಣಾಧಿಕಾರಿ ನಿತ್ಯಾನಂದ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಲೋಹಿತ್ ಇದ್ದರು.
