ಕಳಸ:ನೇತ್ರಾವತಿ ಟ್ರೆಕ್ಕಿಂಗ್ ತೆರಳಿದ್ದ ಮೈಸೂರಿನ ಮಹಿಳೆಯೊಬ್ಬರು ಇಂದು ಮಧ್ಯಾಹ್ನ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ಮೈಸೂರಿನ ವೈದ್ಯರ ತಂಡವೊಂದು ನೇತ್ರಾವತಿ ಚಾರಣಕ್ಕೆ ಭಾನುವಾರ ಬೆಳಗ್ಗೆ ತೆರಳಿತ್ತು.ಟ್ರೆಕ್ಕಿಂಗ್ ಮುಗಿಸಿ ವಾಪಸ್ ಬರುವಾಗ ವೈದ್ಯೆ ಮಾಧುರಿ(೩೧) ಜಾರಿ ಬಿದ್ದಿದ್ದಾರೆ. ಅವರ ಕಾಲಿಗೆ ಗಂಭೀರ ಗಾಯಗಳು ಆಗಿದ್ದು ಮುಂದಕ್ಕೆ ಹೆಜ್ಜೆ ಇಡಲು ಅಸಾಧ್ಯವಾಗಿದೆ.ಆನಂತರ ಅವರನ್ನು ಸಂಸೆವರೆಗೂ ಗೆಳಯರು ಹೊತ್ತುಕೊಂಡು ಬಂದಿದ್ದಾರೆ.
ಕಳಸದ ಮಂಜುನಾಥೇಶ್ವರ ಆಸ್ಪತ್ರೆಗೆ ಕರೆ ತಂದಾಗ ಅವರ ಕಾಲಿನ ಮೂಳೆಗೆ ಪೆಟ್ಟಾಗಿರುವುದು ಕಂಡು ಬಂದಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ನೇತ್ರಾವತಿ ಚಾರಣಕ್ಕೆ ಹೋಗುವವರಿಗೆ ಅರಣ್ಯ ಇಲಾಖೆಯು ಗರಿಷ್ಟ ಪ್ರವೇಶ ದರ ವಸೂಲಿ ಮಾಡುತ್ತಿದೆ.ಆದರೆ ಚಾರಣಿಗರ ಸುರಕ್ಷತೆಗೆ ಯಾವುದೇ ಗಮನ ನೀಡುತ್ತಿಲ್ಲ.ಪ್ರಥಮ ಚಿಕಿತ್ಸೆಯ ಯಾವ ವ್ಯವಸ್ಥೆಯೂ ಇಲ್ಲ ಎಂದು ಚಾರಣಿಗರು ಅಸಮಾಧಾನ ಹೊರಹಾಕಿದ್ದಾರೆ.
