ಕಳಸ:ಇಲ್ಲಿನ ಮುಖ್ಯರಸ್ತೆಯ ಸಾಯಿ ಮಂದಿರಲ್ಲಿ ನವರಾತ್ರಿ ಪ್ರಯುಕ್ತ ಭಾನುವಾರದಿಂದ ವಿಜಯದಶಮಿವರೆಗೆ ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ.
೧೦ ದಿನಗಳ ಕಾಲ ಈ ಪ್ರದರ್ಶನ ವೀಕ್ಷಿಸಲು ಸ್ಥಳೀಯರಿಗೆ ಮುಕ್ತ ಅವಕಾಶ ಇದೆ.ಆಸಕ್ತರು ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೂ ವೈವಿಧ್ಯಮಯ ಗೊಂಬೆಗಳ ಪ್ರದರ್ಶನ ವೀಕ್ಷಿಸಬಹುದು ಎಂದು ಸಂಘಟಕರಾದ ಕೆ.ಕೆ.ಬಾಲಕೃಷ್ಣ ಭಟ್ ತಿಳಿಸಿದ್ದಾರೆ.
