ಕಳಸ:ಇಲ್ಲಿನ ಸರ್ಕಾರಿ ಕೆಪಿಎಸ್ ಪೌಢಶಾಲೆಯ ಗಣಿತ ಶಿಕ್ಷಕ ಸಂದೇಶ್ ಕೆ.ಎಲ್.ಅವರಿಗೆ ರಾಜ್ಯ ಮಟ್ಟದ ಅನಿತಾ ಕೌಲ್ ಪ್ರಶಸ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಲೆ ಮರೆ ಕಾಯಿಯಂತೆ ಸೇವೆ ಮಾಡುತ್ತಿರುವ ಈ ತಪಸ್ವಿಯನ್ನು ಪರಿಚಯಿಸುವ ಯತ್ನ ಇದು.
ಕಳಸ ತಾಲೂಕು ಕಳಕೋಡಿನ
ಶ್ರೀಮತಿ ಶಾಂತ ಮತ್ತು ಶ್ರೀ ಲಕ್ಷ್ಮಣ ಆಚಾರ್ಯ ಇವರ ತೃತೀಯ ಪುತ್ರನಾಗಿ ಜನಿಸಿದ ಸಂದೇಶ ಕೆ. ಎಲ್. ಇವರು
ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದಲ್ಲಿ
ಮಾಡಿರುತ್ತಾರೆ.
ಪ್ರಾರಂಭದಿಂದಲೂ ಗಣಿತ ಹಾಗೂ ವಿಜ್ಞಾನ ಕಲಿಕೆಯಲ್ಲಿ ಮುಂದಿದ್ದ ಇವರನ್ನು ಪ್ರೌಢಶಾಲಾ ಶಿಕ್ಷಕರು ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಲು ಪ್ರೇರೇಪಿಸಿದರು. ಅದರಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು
ಕುದುರೆಮುಖದಲ್ಲಿ
ಪಿಯುಸಿಯನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿದರು.
ಕೊಪ್ಪದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ. ಎಸ್ಸಿ. ಪದವಿ ಪಡೆದ ಇವರು
ಕುವೆಂಪು ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಎಂ.ಎಸ್ಸಿ. ಪದವಿ ಪಡೆದರು. ನಂತರ ಬಿಜಿಎಸ್ ಬಿ.ಎಡ್. ಕಾಲೇಜಿನಲ್ಲಿ ಬಿ. ಎಡ್. ಪದವಿ ಪಡೆದು 2008ರಲ್ಲಿ
ಕಳಸದ ಜೆ.ಇ.ಎಂ.
ಶಾಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
2013ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರ್ಕಾರಿ ಪ್ರೌಢಶಾಲೆ ತಿಮ್ಮರಾವತನಹಳ್ಳಿ (ಆಂಧ್ರಪ್ರದೇಶದ
ಗಡಿಯಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ಶಾಲೆ)
ಸರ್ಕಾರಿ ಶಿಕ್ಷಕನಾಗಿ
ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಇಲ್ಲಿ ತೆಲುಗು ಪ್ರಭಾವದಿಂದ ಕನ್ನಡವನ್ನು ಮಾತನಾಡಲು ಕಷ್ಟ ಪಡುತ್ತಿದ್ದ
ವಿದ್ಯಾರ್ಥಿಗಳಿಗೆ ಗಣಿತವನ್ನು ಬೋಧಿಸುವ
ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಮೂಲಕ ಅನೇಕ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ತೆಗೆದುಕೊಳ್ಳಲು ಪ್ರೇರಣೆಯಾದರು.
2016ರ ನವಂಬರ್ ತಿಂಗಳಿನಲ್ಲಿ
ಕಳಸದ ಕೆಪಿಎಸ್ ಪ್ರೌಢಶಾಲೆಗೆ ವರ್ಗಾವಣೆಯಾಗಿ ಬಂದಂತಹ ಇವರು
ಗಣಿತ ಬೋಧನೆಯ ಜೊತೆಗೆ
2018ರಲ್ಲಿ ಪ್ರಾರಂಭವಾದ
ಅಟಲ್ ಟಿಂಕರಿಂಗ್ ಲ್ಯಾಬ್
ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ಲ್ಯಾಬ್ ನಲ್ಲಿ ಇದ್ದಂತಹ ತೀರ ಅಪರಿಚಿತವಾದ ವೈಜ್ಞಾನಿಕ ಉಪಕರಣಗಳನ್ನು
ಆನ್ಲೈನ್ ನ ಮೂಲಕ ಹಾಗೂ ನೀತಿ ಆಯೋಗದಿಂದ ಸಭೆ ಮೂಲಕ ಸತತವಾಗಿ
ಅಧ್ಯಯನವನ್ನು ಮಾಡಿ
ಅದನ್ನು ಮಕ್ಕಳಿಗೆ ತಲುಪಿಸುವ ಕೆಲಸವನ್ನು ಮಾಡಿದರು.
ಇದರ ಫಲಶೃತಿಯಾಗಿ ಮೊದಲ ಬಾರಿಗೆ ಶಾಲೆಯ ವಿದ್ಯಾರ್ಥಿಗಳು ಎಟಿಎಲ್ ಮ್ಯಾರಥಾನ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.
ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಕಂಪನಿಯಿಂದ ಇಂಟರ್ನ ಶಿಪ್ ಪಡೆಯುವ ಅವಕಾಶ
ಒದಗಿ ಬಂತು. inspire ಪ್ರಶಸ್ತಿ
ಸ್ಪರ್ಧೆಯಲ್ಲಿ ಪ್ರತಿ ವರ್ಷವೂ
ಜಿಲ್ಲಾ ಹಂತಕ್ಕೆ 4 ರಿಂದ 5 ಮಾದರಿಗಳು ಆಯ್ಕೆಗೊಳ್ಳುವಂತೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿದ್ದರು. ಇವರ ಮಾರ್ಗದರ್ಶನದಲ್ಲಿ
ಒಂದು ಮಾದರಿ ರಾಜ್ಯ ಮಟ್ಟಕ್ಕೆ
ಹಾಗೂ ಕಳೆದ ಬಾರಿ ಒಂದು ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ಇವರ ವಿಶೇಷ
ಪ್ರಯತ್ನದಿಂದಾಗಿ ಅಂತರಾಷ್ಟ್ರೀಯ ಬ್ರಿಕ್ಸ್ ಮ್ಯಾತ್
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಯಿತು.
ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಕ್ವಿಜ್ ಗೆ ಶಾಲೆಯ ವಿದ್ಯಾರ್ಥಿಗಳನ್ನು ವಿಶೇಷವಾಗಿ ತರಬೇತಿಗೊಳಿಸಿ ಆನ್ಲೈನ್ ಕ್ವಿಜ್ ನಲ್ಲಿ
ಮಾಡಿದ ಸಾಧನೆಗಾಗಿ ಸೈಬರ್ ಸ್ಮಾರ್ಟ್ ಸ್ಕೂಲ್ ಪ್ರಶಸ್ತಿಯನ್ನು ಶಾಲೆಗೆ ನೀಡಲಾಗಿದೆ.
ಇದರ ಜೊತೆಗೆ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ಎನ್.ಎಂ.ಎಂ.ಎಸ್. ಸ್ಕಾಲರ್ ಶಿಪ್ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ವಿಶೇಷವಾಗಿ ತಯಾರಿಗೊಳಿಸಿ
ಪ್ರತಿ ವರ್ಷವೂ ಮೂರರಿಂದ ಐದು ವಿಧ್ಯಾರ್ಥಿಗಳು
48 ಸಾವಿರ ರೂಪಾಯಿಗಳ ಸ್ಕಾಲರ್ ಶಿಪ್ ಪಡೆಯಲು ಕಾರಣರಾಗಿದ್ದಾರೆ.
ಪ್ರತಿಭಾ ಕಾರಂಜಿ ಹಾಗೂ ಕ್ರೀಡೆಗೂ ಕೂಡ ಮಕ್ಕಳನ್ನು ಪ್ರೋತ್ಸಾಹಿಸುತ್ತಾ,
ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ತಮ್ಮ ವಿಷಯದಲ್ಲಿ ಅತ್ಯುತ್ತಮವಾದ ಫಲಿತಾಂಶವನ್ನು ನೀಡುತ್ತಾ ಬಂದಿರುತ್ತಾರೆ. ಕಳೆದ ಬಾರಿ ಇಬ್ಬರು ವಿದ್ಯಾರ್ಥಿಗಳು ಗಣಿತದಲ್ಲಿ ನೂರು ಅಂಕಗಳನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ.
ಹೀಗೆ ಸದಾ ವಿದ್ಯಾರ್ಥಿಗಳ
ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ
ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರೊಗ್ರೆಸಿವ್ ಎಜುಕೇಟರ್ ಎಂಬ ಬಿರುದನ್ನು ನೀಡಿದೆ.
ಈ ಎಲ್ಲ ಸಾಧನೆಗಳನ್ನು ಗಮನಿಸಿದ ಏಷ್ಯಾ ಟುಡೇ
ಇವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ಬೆಸ್ಟ್ ಪಬ್ಲಿಕ್ ಸ್ಕೂಲ್ ಅವಾರ್ಡ್ ಅನ್ನು ನೀಡಿ ಗೌರವಿಸಿದೆ.

ಇವರ ಈ ಎಲ್ಲಾ ತೆರೆ ಮರೆಯಲ್ಲಿನ
ಸಾಧನೆಗಳನ್ನು ಗುರುತಿಸಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಜನಪರ ಮತ್ತು ದಕ್ಷ ಐ ಎ ಎಸ್ ಅಧಿಕಾರಿ ಶ್ರೀಮತಿ ಅನಿತಾ ಕೌಲ್ ಸ್ಮರಣಾರ್ಥ ನೀಡುವ ಪ್ರತಿಷ್ಠಿತ ಹಾಗೂ ಅರ್ಥಪೂರ್ಣ ಪ್ರಶಸ್ತಿಯಾದ ರಾಜ್ಯಮಟ್ಟದ ಅತ್ಯುತ್ತಮ ಅನಿತಾ ಕೌಲ್ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದಿನಾಂಕ:07.01.2024 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಡಾ. ಹೆಚ್. ಎನ್. ಮಲ್ಟಿ ಮೀಡಿಯಾ ಆಡಿಟೋರಿಯಂನಲ್ಲಿ ಈ ನಾಡಿನ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಹೆಸರಾಂತ ಮನೋವೈದ್ಯರು ಮತ್ತು ಏಎಗಿS ನ ಅಧ್ಯಕ್ಷರಾದ ಡಾ, ಸಿ. ಆರ್. ಚಂದ್ರಶೇಖರ್ ಹಾಗೂ ಈ. ಬಸವರಾಜ್, ಡಾ.ರಾಜ ನಾಯಕ್ ಸಮ್ಮುಖದಲ್ಲಿ ಶಿಕ್ಷಕ ಸಂದೇಶ್ ಕೆ .ಎಲ್. ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇವರ ಜೊತೆಗೆ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ ,ಕಾಲೇಜು ಹಾಗೂ ಪ್ರಾಂಶುಪಾಲರು ಮತ್ತು ಎಸ್ಡಿಎಂಸಿ
ವಿಭಾಗದಿಂದ ಒಟ್ಟು 49 ಜನರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
