ಕಳಸ:ಇಲ್ಲಿನ ಕಾಂಗ್ರೆಸ್ ಮುಖಂಡ, ಯುವ ಮುಂದಾಳು ಮೊಹಮ್ಮದ್ ರಫೀಕ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಏಶಿಯಾ ಇಂಟರ್ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ ಮೊಹಮ್ಮದ್ ರಫೀಕ್ ಅವರಿಗೆ ಈ ಗೌರವ ಪದವಿ ಪ್ರದಾನ ಮಾಡಿದೆ.
ರಾಜಕೀಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ರಫೀಕ್ ಅವರ ಅಪ್ರತಿಮ ಸೇವೆ ಪರಿಗಣಿಸಿ ಈ ಪದವಿ ನೀಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ಪ್ರಶಸ್ತಿ ಪತ್ರದಲ್ಲಿ ವಿವರಿಸಲಾಗಿದೆ.
