ಕಳಸ:ಇಲ್ಲಿನ ಸೀಮೆ ಬಸದಿಯಾದ ಚಂದ್ರನಾಥ ಸ್ವಾಮಿ ಬಸದಿ ಮತ್ತು ಪದ್ಮಾವತಿ ದೇವಸ್ಥಾನದಲ್ಲಿ ಮೇ 18ರಿಂದ 22ರವರೆಗೆ ಧಾಮಸಂಪ್ರೋಕ್ಷಣೆ ಮತ್ತು ಪಂಚಕಲ್ಯಾಣದ ವಿಧಿಗಳು ನೆರವೇರಲಿದೆ.
ಮೂರು ವರ್ಷದ ಹಿಂದೆ ಆರಂಭವಾದ ಬಸದಿಗಳ ಪುನರ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಅತ್ಯಂತ ಸುಂದರ ವಾಸ್ತುಶಿಲ್ಪದಿಂದ ನಯನಮನೋಹರವಾಗಿದೆ.ಚಂದ್ರನಾಥ ಬಸದಿಯ ಪಕ್ಕದಲ್ಲೇ ಪದ್ಮಾವತಿ ದೇವಸ್ಥಾನ, ಕ್ಷೇತ್ರಪಾಲ ಗುಡಿಯ ಶಿಲಾಮಯ ನಿರ್ಮಾಣವೂ ನಡೆದಿದೆ.

ನೂತನ ಬಸದಿ ಮುಂಭಾಗ ಪಂಚಕಲ್ಯಾಣದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.ಜೈನ ಮುನಿ ಮಹಿಮಾಸಾಗರ್ ಅವರ ಪ್ರೇರಣೆಯಿಂದಾಗಿ ನೂತನ ಶಿಲಾಮಯ ಬಸದಿ ನಿರ್ಮಾಣದ ಸಾಹಸಕ್ಕೆ ಕೈಹಾಕಿದೆವು. ಕಳಸ ಸೀಮೆಯ ಎಲ್ಲ ಶ್ರಾವಕರು, ವಿವಿಧ ಮಠಾಧೀಶರು ನೀಡಿದ ಸಹಕಾರದಿಂದ ಸುಂದರವಾದ ಶಿಲಾಮಯ ಬಸದಿ ನಿರ್ಮಾಣ ನಡೆಯುತ್ತಿದೆ ಎಂದು ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಚಂದ್ರನಾಥ ಬಸದಿಯ ಐತಿಹಾಸಿಕ ಚಂದ್ರನಾಥ ಮೂರ್ತಿಯ ಜೊತೆಗೆ ನೂತನವಾಗಿ ಜ್ವಾಲಾಮಾಲಿನಿ ಮತ್ತು ಶ್ಯಾಮಯಕ್ಷ ಪ್ರತಿಷ್ಟಾಪನೆ ನೆರವೇರಲಿದೆ.ಪದ್ಮಾವತಿ ದೇವಸ್ಥಾನದಲ್ಲಿ ನೂತನ ಪಾಶ್ರ್ವನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ ಎಂದೂ ಅವರು ತಿಳಿಸಿದರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (0.5460187, 0.48557281);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 48;
ಬಸದಿ ಪಕ್ಕದಲ್ಲೇ ನೂತನವಾಗಿ ಕ್ಷೇತ್ರಪಾಲ ಮತ್ತು ಧರ್ಮದೇವತೆಗಳ ಗುಡಿ ನಿರ್ಮಾಣ ಆಗುತ್ತಿದೆ. ಜೈನ ಮುನಿಗಳ ವಾಸ್ತವ್ಯಕ್ಕೆ ತ್ಯಾಗಿ ಭವನ ಕೂಡ ನಿರ್ಮಾಣ ಮಾಡಲಾಗುತ್ತಿದೆ.ಪಂಚಕಲ್ಯಾಣದ 5 ದಿನವೂ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಲಿದೆ.
18ರಂದು ರಾಜ್ಯ ಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಶ್ರೀವರ್ಮ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು ನಾಡಿನ ಹೆಸರಾಂತ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 6ರಿಂದ ಸ್ಥಳೀಯ ಮಹಿಳೆಯರು ಮತ್ತು ವೃತ್ತಿಪರ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ.
