ಕಳಸ:ಇಲ್ಲಿನ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆಯಾಗಿ ಕಿರಣ ಬ್ರಹ್ಮದೇವ ಅಧಿಕಾರ ಸ್ವೀಕರಿಸಿದ್ದಾರೆ.
ಕಾರ್ಯದರ್ಶಿಯಾಗಿ ಆಶಾ ಗುರು ಶೇಟ್, ಖಜಾಂಚಿಯಾಗಿ ಕಲ್ಪನಾ ಅಜಿತ್, ನಿರ್ದೇಶಕರಾಗಿ ಫಾತಿಮಾ ರೆಹಮಾನ್, ಮನೋರಾಧಿನಿ ಧರಣೇಂದ್ರ, ಸುಜಯ ಸದಾನಂದ, ಶೋಭಾ ದೇಸಾಯಿ, ಅಮಿತ ವಿನಾಯಕ್, ಮೇನಕ ಹೆಬ್ಬಾರ್, ಜಾನಕಿ ಸುಂದರೇಶ್ ಆಯ್ಕೆಯಾದರು.

ನಿರ್ಗಮಿತ ಅಧ್ಯಕ್ಷೆ ಸುಜಯಾ ಮತ್ತು ನಿರ್ಗಮಿತ ಕಾರ್ಯದರ್ಶಿ ಅಮಿತ ಕಳೆದ 2 ವರ್ಷದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
