ಕಳಸ:ಹಿರೇಬೈಲಿನ ಸೇಕ್ರೆಡ್ ಹಾರ್ಟ್ ಶಾಲೆಯು 14ರ ವಯೋಮಾನದ ವಿದ್ಯಾರ್ಥಿಗಳ ಕಳಸ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸತತ ಎರಡನೇ ವರ್ಷ ಸಮಗ್ರ ಪ್ರಶಸ್ತಿ ಗಳಿಸಿದೆ.
ಪಂಚಮಿ ಮತ್ತು ವಿಘ್ನೇಶ್ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದರು.ಶಾಲೆಯ ತಂಡವು ಬಾಲಕರ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ರಿಲೇಯಲ್ಲಿ ಪ್ರಥಮ ಸ್ಥಾನ , ಬಾಲಕರ ರಿಲೇಯಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ಥ್ರೋಬಾಲ್ ಪ್ರಥಮ ಸ್ಥಾನ, ವಾಲೀಬಾಲ್ ದ್ವಿತೀಯ ಸ್ಥಾನ ಮತ್ತು ವಿದ್ಯಾರ್ಥಿಗಳಾದ ಸಮರ್ಥ, ನಿಶಾ, ಪೃಥ್ವಿ, ಸೃಜನ್, ಜಾನ್ಸನ್, ಕ್ರಿಶ್ಚಿನ್ ಹಲವಾರು ವೈಯಕ್ತಿಕ ಬಹುಮಾನ ಗಳಿಸಿದ್ದಾರೆ.
