ಕಳಸ:ಮುಜೆಕಾನು ಗ್ರಾಮದಿಂದ ಕಳಸಕ್ಕೆ ಬರುತ್ತಿದ್ದ ಕೃಷಿಕರೊಬ್ಬರಿಗೆ ಕಾಡುಕೋಣ ಇರಿದು ಗಂಭೀರ ಗಾಯಗಳಾಗಿವೆ.
ಮುಜೆಕಾನು ಗ್ರಾಮದ ಮರಿಗೌಡ(೬೦) ಶನಿವಾರ ಕಳಸಕ್ಕೆ ಬರುವ ದಾರಿಯಲ್ಲಿ ಕರ್ನಾಳಿ ಸಮೀಪ ಅವರಿಗೆ ಕಾಡುಕೋಣ ಕಂಡು ಬಂದಿದೆ.ಕೋಣದ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ.
ಆದರೂ ಕೋಣ ಮರಿಗೌಡ ಅವರ ಎದೆಗೆ ಕೋಡಿನಿಂದ ಇರಿದು ದೂರಕ್ಕೆ ಎಸೆದಿದೆ.ಇದರಿಂದ ತೀವ್ರವಾಗಿ ರಕ್ತಸ್ರಾವ ಆಗಿದ್ದ ಮರಿಗೌಡ ರಸ್ತೆಯಲ್ಲಿ ಬಿದ್ದು ನರಳುತ್ತಿದ್ದರು.ಸಮೀಪದಲ್ಲಿ ಇದ್ದ ಸ್ಥಳೀಯರು ಅವರನ್ನು ಚಿಕಿತ್ಸೆಗೆ ಕಳಸಕ್ಕೆ ಕರೆತಂದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಮಾನಸ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಗಳೂರಿಗೆ ಕರೆದೊಯ್ಯಲಾಗಿದೆ. ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ.ಗಾಯದ ತೀವ್ರತೆಗೆ ಹೃದಯವು ಹೊರಗೆ ಕಾಣುತ್ತಿತ್ತು.
