ಕಳಸ:ಕಳೆದ ವಾರ ಕಾಡುಕೋಣದ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮುಜೇಕಾನಿನ ಮರಿಗೌಡ ಕುಟುಂಬಕ್ಕೆ ಹೊರನಾಡು ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ನೆರವು ನೀಡಿ ಹೃದಯವಂತಿಕೆ ತೋರಿದ್ದಾರೆ.
ಕಾಡುಕೋಣ ಮರಿಗೌಡ ಅವರ ಎದೆಗೆ ಇರಿದ ನಂತರ ಅವರು ಗಂಭೀರ ಗಾಯಗೊಂಡಿದ್ದರು.ಮAಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಿಗೌಡ ಅವರಿಗೆ ಶಸ್ತçಚಿಕಿತ್ಸೆ ನಡೆದಿತ್ತು.ಚಿಕಿತ್ಸೆಗೆ ೩ ಲಕ್ಷ ರೂಪಾಯಿ ಬೇಕಾಗಿರುವುದು ಮತ್ತು ಅವರ ಕುಟುಂಬ ಹಣ ಹೊಂದಿಸಲು ಕಷ್ಟ ಪಡುತ್ತಿರುವ ಬಗ್ಗೆ ‘ voice of kalasa ‘ ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ತಿಳಿಸಿದ್ದರು. ಕುಟುಂಬದ ಸದಸ್ಯರನ್ನು ದೇವಸ್ಥಾನಕ್ಕೆ ಬರಲು ತಿಳಿಸಿದ್ದರು.
ಅದರಂತೆ ಮಂಗಳವಾರ ಮರಿಗೌಡ ಅವರ ಪತ್ನಿ ರತ್ನ ದೇವಸ್ಥಾನಕ್ಕೆ ಹೋಗಿದ್ದರು. ಮರಿಗೌಡ ಚಿಕಿತ್ಸೆಗೆ ಅನುಕೂಲ ಆಗುವಂತೆ ೨೦ ಸಾವಿರ ರೂಪಾಯಿ ಮೊತ್ತದ ಚೆಕ್ ಅನ್ನು ಮರಿಗೌಡ ಪತ್ನಿ ರತ್ನ ಅವರಿಗೆ ಭೀಮೇಶ್ವರ ಜೋಷಿ ಹಸ್ತಾಂತರಿಸಿದರು. ಮರಿಗೌಡ ಅವರು ಶೀಘ್ರ ಗುಣಮುಖರಾಗಲಿ ಎಂದೂ ಅವರು ಹರಸಿದರು.

