ಕಳಸ:ಹೊರನಾಡು ರಸ್ತೆಯ ಹೆಬ್ಬೊಳೆಯಲ್ಲಿ ತೋಟ ಕಾರ್ಮಿಕರೊಬ್ಬರು ಶನಿವಾರ ಬೆಳಗ್ಗೆ ಮುಳುಗಿದ್ದಾರೆ.
ಅಲ್ಲಿಗೆ ಸಮೀಪದ ತೋಟವೊಂದಕ್ಕೆ ೨ ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರು ಬಂದಿದ್ದರು. ಭದ್ರಾ ನದಿಯಲ್ಲಿ ಅವರು ಶನಿವಾರ ಬೆಳಿಗ್ಗೆ ಮುಳುಗಿದ್ದನ್ನು ಅಲ್ಲೇ ಇದ್ದ ಸ್ಥಳೀಯರು ನೋಡಿದ್ದರು. ಈ ಬಗ್ಗೆ ಅವರು ಕಳಸ ಪೊಲೀಸರಿಗೆ ವಿಷಯ ತಿಳಿಸಿದರು.

ಕಳಸ ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ ಗೌಡ , ತಹಸೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಅಜ್ಜೇಗೌಡ, ಕಳಸ ಪಿಡಿಓ ಕವೀಶ್ ಶವ ಪತ್ತೆಗೆ ಅಗತ್ಯ ಕ್ರಮ ವಹಿಸಿದರು. ಅಗ್ನಿಶಾಮಕ ಸಿಬ್ಬಂದಿ ದಿನವಿಡೀ ಪ್ರಯತ್ನ ನಡೆಸಿದರೂ ಶವ ಪತ್ತೆ ಆಗಿಲ್ಲ.
೨೪ ಗಂಟೆಯ ನಂತರ ಶವವು ನೀರಿನಿಂದ ಮೇಲಕ್ಕೆ ಬರುವ ನಿರೀಕ್ಷೆ ಇದ್ದು ಹಳುವಳ್ಳಿವರೆಗೂ ಕಣ್ಗಾವಲು ಇರಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ ತಿಳಿಸಿದ್ದಾರೆ.
