ಕಳಸ:ಇಡಕಿಣಿ ಸಹಕಾರ ಸಂಘವು ಕಳೆದ ಸಾಲಿನಲ್ಲಿ ೭೫ ಕೋಟಿ ರೂಪಾಯಿ ವ್ಯವಹಾರ ನಡೆಸಿ ೮.೨೮ ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಬಿ.ಪಿ.ಭೋಜರಾಜ್ ತಿಳಿಸಿದರು.
ಹಿರೇಬೈಲಿನಲ್ಲಿ ಶನಿವಾರ ನಡೆದ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು ೩೩೫೦ ಸದಸ್ಯರು ಇದ್ದು ೯೪.೮೫ ಲಕ್ಷ ರೂಪಾಯಿ ಶೇರು ಬಂಡವಾಳ ಇದೆ.ಬ್ಯಾಂಕು ಒಟ್ಟು ೮ ಕೋಟಿ ರೂಪಾಯಿ ಠೇವಣಿ ಹೊಂದಿದೆ ಎಂದರು.
ಸಂಘವು ಸದಸ್ಯರಿಗೆ ಡಿಸಿಸಿ ಬ್ಯಾಂಕಿನಿAದ ೮ ಕೋಟಿ ರೂಪಾಯಿ ಸಾಲ ಮತ್ತು ಸಂಘದ ಸ್ವಂತ ಬಂಡವಾಳದಿAದ ೮.೩೮ ಕೋಟಿ ವಿವಿಧ ಸಾಲ ನೀಡಿದೆ ಎಂದರು.
ನಿರ್ದೇಶಕ ಹೆಮ್ಮಕ್ಕಿ ಗಿರೀಶ್ ಮಾತನಾಡಿ, ಸಂಘವು ಈ ಸಾಲಿನಲ್ಲಿ ಮತ್ತಷ್ಟು ಅಭಿವೃದ್ದಿ ಹೊಂದಿದೆ. ಈ ಭಾರಿ ೨ ಕೋಟಿ ವೆಚ್ಚದಲ್ಲಿ ವಿವಿಧ ಉದ್ದೇಶದ ಗೋದಾಮು, ಅಂಗಡಿ ಮಳಿಗೆ, ವಾಣಿಜ್ಯ ಸಂಕೀರ್ಣ ನಿರ್ಮಿಸಿದೆ ಎಂದರು.
ಸಂಘದ ಸದಸ್ಯರ ಲಾಭಾಂಶವನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದು ಅವರು ಕೋರಿದರು. ಇದಕ್ಕೆ ಸದಸ್ಯರು ಒಕ್ಕೊರಲಿನಿಂದ ಒಪ್ಪಿದರು.
ಸಂಘದ ಉಪಾಧ್ಯಕ್ಷೆ ಕೆ.ಟಿ.ವೃಂದಾವತಿ, ನಿರ್ದೇಶಕರಾದ ಸಂತೋಷ್ ಎಂ.ಸಿ. ಹೆಚ್.ಆರ್.ಮಹೇಶ್, ವಿ.ಸಿ.ಗೋವರ್ಧನ್, ಪುರುಷೋತ್ತಮ ಸುವರ್ಣ, ಸುಲೋಚನ, ಪ್ರೆಸಿಲ್ಲಾ ಸಾಲ್ಡಾನಾ, ನಾಗೇಶ್, ಹರೀಶ್, ರವೀಂದ್ರ ಭಟ್ ಭಾಗವಹಿಸಿದ್ದರು.
