ಕಳಸ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ 4 ಪ್ರೌಢಶಾಲೆಗಳು ಶೇ.100 ಫಲಿತಾಂಶದ ಸಾಧನೆ ತೋರಿವೆ.
ಕುದುರೆಮುಖದ ಸರ್ಕಾರಿ ಪ್ರೌಢಶಾಲೆ, ಕಳಸದ ಅಂಬೇಡ್ಕರ್ ವಸತಿ ಶಾಲೆ ಈ ಸಾಧನೆ ಮಾಡಿದ ಸರ್ಕಾರಿ ಶಾಲೆಗಳು ಎಂಬ ಹೆಗ್ಗಳಿಕೆ ಸಾಧಿಸಿವೆ. ಜೊತೆಗೆ ಪಟ್ಟಣದ ಖಾಸಗಿ ಶಾಲೆಗಳಾದ ಜೆಇಎಂ ಶಾಲೆ ಮತ್ತು ಪ್ರಬೋಧಿನಿ ವಿದ್ಯಾ ಕೇಂದ್ರ ಕೂಡ ಶೇ.100 ಫಲಿತಾಂಶ ಪಡೆದಿವೆ.
ಕುದುರೆಮುಖ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ 15 ಮಕ್ಕಳು ಕೂಡ ವಿವಿಧ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಳಸ ಅಂಬೇಡ್ಕರ್ ವಸತಿ ಶಾಲೆಯ ಎಲ್ಲ 34 ಮಕ್ಕಳೂ ತೇರ್ಗಡೆ ಆಗಿದ್ದು ಮೂವರು ಅತ್ಯುನ್ನತ ದರ್ಜೆಯಲ್ಲಿ ಮತ್ತು 24 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲ್ಲೇಶ್ (551), ಕಿಶನ್(550) ಮತ್ತು ತೇಜಶ್ರೀ (542) ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಜೆಇಎಂ ಶಾಲೆಯ ಎಲ್ಲ 62 ವಿದ್ಯಾರ್ಥಿಗಳು ಕೂಡ ತೇರ್ಗಡೆ ಆಗಿದ್ದಾರೆ.26 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಪಡೆದಿದ್ದು 34 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಶ್ರಾವಣಿ (611), ಪ್ರಾರ್ಥನಾ ಮಹೇಶ್(605) ಮತ್ತು ಜ್ಯೋತಿಶ್ರೀ (605) ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

ಪ್ರಬೋಧಿನಿ ಶಾಲೆಯ ಎಲ್ಲ 45 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 18 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಮತ್ತು 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿಂಚನ(611), ಕೆ.ಪಿ ಪ್ರಣೀತಾ (598) ಮತ್ತು ಸಂಜನಾ ವಿ.ಸಿ. (596) ಮೊದಲ ಮೂರು ಸ್ಥಾನ ಗಳಿಸಿದ್ದಾರೆ.
ಕಳಸ ಕೆಪಿಎಸ್ ಶಾಲೆಯ 102 ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯು ಈವರೆಗಿನ ಗರಿಷ್ಟ ಫಲಿತಾಂಶವಾದ ಶೇ.93ರ ಸಾಧನೆ ಮಾಡಿದೆ.ಶಾಲೆಯ ಆಂಗ್ಲ ಮಾಧ್ಯಮ ವಿಭಾಗ ಶೇ.100 ಫಲಿತಾಂಶ ಪಡೆದಿದೆ.
