ಬರಹ:
ಚಂದ್ರಮೋಹನ್,
ಪ್ರಿನ್ಸ್ ಆಫ್ ಕಳಸ, ಹೋಂಸ್ಟೇ ಮಾಲೀಕರು
ಮೆಸ್ಕಾಂ ಇಲಾಖೆಯವರಿಗೆ 

ನಮನಗಳು.


ನಮನಗಳು. ಇಂಥ ಮಳೇಲಿ – ಗಾಳೀಲಿ – ಮಿಂಚಿನ ನಡುವೆ ಶ್ರಮಿಸಿದ ತಮ್ಮೆಲ್ಲರ ಕಾಯ೯ ನಿಜಕ್ಕೂ ಶ್ಲಾಘನೀಯ ,ಮೆಚ್ಚತಕ್ಕದ್ದು ಆಶ್ಚರ್ಯವೂ ಬರಿಸುವಂಥದ್ದು.
ಜ್ವರ – ವಾಂತಿ – ಭೇದಿಯ ಹಾಗೆ ಸಾಲುಸಾಲಾಗಿ ಬಂದು ರೋಗಿಗೆ ಕಾಡೋ ಹಾಗೆ, ಈ ಎರಡು ವಾರ
ಮಿಂಚು- ಮಳೆ – ಗಾಳಿಯ ನಡುವೆ ತಾವೆಲ್ಲರೂ ಕಡಿದ ಮರಗಳು, ಜೋಡಿಸಿದ ವೈರ್ ಗಳು, ಕಚ್ಚಿಸಿಕೊಂಡ ಜಿಗಣೆಗಳು, ಹೊಡೆಸಿಕೊಂಡ ಶಾಕ್ ಗಳು, ಎಲ್ಲವನ್ನೂ ಪರಿಗಣಿಸುತ್ತಾ ಮತ್ತೊಮ್ಮೆ ” ಬಿಗ್ ಹ್ಯಾಟ್ಸಾಫ್ “

ಊರಿನವರಿಗೆ ಒಂದು ಮನವಿ. ಎಲ್ಲೇ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಕಂಡರೂ, ಒಂದು ಮುಗುಳ್ನಗೆ ಬೀರಿ, 10 ಗಂಟೆಯಾದರೆ ಕಾಫಿ, 12 ಆದರೆ ಮಜ್ಜಿಗೆ, 1 ಗಂಟೆಯಾದರೆ ಊಟ ಹಾಕಿ ಸತ್ಕರಿಸಿ, ಹತ್ತಿರದ ಯಾವುದೇ ಹಳ್ಳಿ ಅಥವಾ ಕಾಡಲ್ಲಿ ಕೆಲಸ ಮಾಡುವಾಗ. ಇವರುಗಳು ಯಾರೂ ಬುತ್ತಿ ತಂದಿರಲ್ಲ ಮಧ್ಯಾಹ್ನ ಊಟಕ್ಕೆ ಮತ್ತು ಈ ಕೆಲಸ ಬೆಳಿಗ್ಗೆ ಶುರು ಮಾಡಿದರೆ ಹಲವಾರು ಬಾರಿ ಸಂಜೆಯವರೆಗೂ ಮುಂದುವರೆಯುತ್ತದೆ, ಅವಿರತವಾಗಿ.
ಅಂದಾಜು ಮಾಡಿ, ಊಟ ಹಾಕಿ ಸತ್ಕರಿಸಿ, ನಿಮ್ಮದೇ ಮನೆಯ ನೆಂಟರಂತೆ.
ಮೆಸ್ಕಾಂ ಇಲಾಖೆಗೂ ಒಂದು ಮಾತು.
ಸಾವ೯ಜನಿಕರು ಕರೆಂಟ್ ಹೋದ ಕೂಡಲೇ ಬೈಯುತ್ತಾರೆ, ಶಪಿಸುತ್ತಾರೆ ಎಂದು ನೀವು ಭಾವಿಸಿಕೊಂಡಿದ್ದೀರಿ…
ಆದರೆ ಭಾರತ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ಕೂಡಲೇ, ಆ ಕ್ಷಣದಲ್ಲಿ ಬರೋ ಉದ್ಘಾರ ಇದೆಯಲ್ಲ ” ಹೋ…… ” ಎಂಬ ಸಂಭ್ರಮ, ಮನೆ ಮನೆಗಳಲ್ಲಿ…

ಆ ಸಂಭ್ರಮ ತರೋಕೆ ಸಾಧ್ಯವಾಗುವುದು ಕೇವಲ ಮೆಸ್ಕಾಂ ಇಲಾಖೆಯಿಂದಲೇ.
ಎರಡು ದಿನ ಕರೆಂಟ್ ಇಲ್ಲದಿದ್ದಾಗ, ಮೂರನೇ ದಿನ ಕರೆಂಟ್ ಬಂದಾಗ, ಪ್ರತಿ ಮನೆಮನೆಗಳಲ್ಲಿ ” ಹೋ…. ಕರೆಂಟ್ ಬಂತು ” ಎಂಬ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ ಕೇಳಿಸುತ್ತದೆ.
ಇದು ನೀವು ಜನರಿಗೆ ಕೊಡೋ ಸಡನ್ ಹಾಗೂ ಇನ್ಸ್ಟೆಂಟ್ ಆನಂದ !!
ಬೇರೆಲ್ಲ ಊರುಗಳಿಗಿಂತ ” ಕಳಸ ದವರು ” ಯಾಕೆ ಭಿನ್ನ ಎಂದು ಅಕ್ಕಪಕ್ಕದವರು ಕೇಳಿದರೆ ಹೇಳಿ ಬಿಡಿ.
” ಈಗಲೂ ಕಳಸ ದಲ್ಲಿ ದೀಪ ಬೆಳಗುವವರು ನಾವೇ ಹಾಗೂ ನಾವೇ ಮಳೆಗಾಲದ ಸೂಪರ್ ಸ್ಟಾರ್ ಗಳು. “
