ಕಳಸ:ಪಟ್ಟಣದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯು ಇಂದು ವಿಶಿಷ್ಟವಾಗಿ ಮಕ್ಕಳ ದಿನಾಚರಣೆ ಆಚರಿಸಿತು.
ಕಳಸದ ಪ್ರಭೋಧಿನಿ ಶಾಲೆ, ಅಂಬೇಡ್ಕರ್ ಶಾಲೆ, ಜೆಇಎಂ ಶಾಲೆ ಮತ್ತು ಸರ್ಕಾರಿ ಶಾಲೆಗಳ ನೂರಾರು ಮಕ್ಕಳನನು ದುರ್ಗಾ ಮಂಟಪಕ್ಕೆ ಆಹ್ವಾನಿಸಲಾಗಿತ್ತು.ವಿವಿಧ ಶಾಲೆಗಳ ಮಕ್ಕಳು ಒಂದೆಡೆ ನೆರೆದು ಹಬ್ಬದ ವಾತಾವರಣದಂತೆ ಸಂಭ್ರಮಿಸಿದರು.
ಕಾರ್ಕಳದ ಜ್ಞಾನಸುಧಾ ಕಾಲೇಜಿನ ಉಪನ್ಯಾಸಕಿ ಸಂಗೀತಾ ಕುಲಾಲ್ ಮಾತನಾಡಿ, ಶಿಕ್ಷಣದ ಮಹತ್ವ, ಶೈಕ್ಷಣಿಕ ಪರಿಸರ, ಔದ್ಯೋಗಿಕ ಜೀವನದ ಬಗ್ಗೆ ಉಪನ್ಯಾಸ ನೀಡಿದರು.

ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯಾ ಮಾತನಾಡಿ, ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಯೋಜಿಸುವ ಯೋಚನೆ ಎಲ್ಲರ ಸಹಕಾರದಿಂದ ಸಾಕಾರವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಕುಮಾರ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್ ಇದ್ದರು.ಆನಂತರ ಮಕ್ಕಳಿಗೆ ಹಲವಾರು ಚಟುವಟಿಕೆ, ನೃತ್ಯ ಆಯೋಜಿಸಲಾಗಿತ್ತು.ಮಕ್ಕಳು ಸಂಭ್ರಮದಿಂದ ಭಾವಹಿಸಿದ್ದರು.

