ಕಳಸ:ಹಿರೇಬೈಲು ಗ್ರಾಮಸ್ಥರು ಕನ್ನಡ ರಾಜ್ಯೋತ್ಸವವನ್ನು ಶನಿವಾರ ವಿನೂತನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.
ಹಿರೇಬೈಲಿನ ವೆಸ್ಟನ್ ಘಾಟ್ ತಂಡದ ಸದಸ್ಯರು, ಮತ್ತು ಆಟೋ ಚಾಲಕರು ಮಾಲೀಕರ ಸಂಘವು ಜಂಠಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮವನ್ನು ಸ್ಥಳೀಯ ಮುಖಂಡರು ಉದ್ಘಾಟಿಸಿದರು.
ಆನಂತರ ನಡೆದ ಸಭೆಯಲ್ಲಿ ಸಾಹಿತಿ ಪ್ರೇಮ್ ಸಾಗರ್ ಕಾರಕ್ಕಿ, ಆಂಬುಲೆನ್ಸ್ ಚಾಲಕ ಶರೀಫ್, ಸ್ಥಳೀಯ ಪ್ರತಿಭೆಗಳಾದ ಮೋಹನ್, ರಮೇಶ್ ಕೆಳಗೂರು, ಸಂತೋಷ್ ಹೊನ್ನಯ್ಯ, ರಮೇಶ್ ಮಲ್ನಾಡ್, ಮಂಜುನಾಥ ಹಟ್ಲ, ಡಾ.ರಂಜಿತ್ ಕುಮಾರ್, ಚಿತ್ರ ನಿರ್ಮಾಪಕ ರವಿ ರೈ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಮುಖಂಡರಾದ ವಿಶ್ವನಾಥ್, ಹೆಮ್ಮಕ್ಕಿ ಗಿರೀಶ್, ಸಂತೋಷ್ ಎಂ.ಸಿ. ಮತ್ತಿತರರು ಇದ್ದರು.
ಪೊಲೀಸ್ ಇಲಾಖೆಯ ಸಿಬ್ಬಂದಿ, ಹಿರೇಬೈಲು ಮೂಲದ ಕವಿ ಮೋನಪ್ಪ ಅವರು ರಚಿಸಿದ ಮೈಲಿಗಲ್ಲು ಎಂಬ ಕವನ ಸಂಕಲನವನ್ನು ಸಾಹಿತಿ ಪ್ರೇಮ್ ಸಾಗರ್ ಕಾರಕ್ಕಿ ಬಿಡುಗಡೆ ಮಾಡಿದರು.

