ಕಳಸ:ತಾಲ್ಲೂಕಿನ 3 ಶಾಲೆಗಳ 100 ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯು ಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಪ್ರವಾಸಕ್ಕೆ ಇತ್ತೀಚೆಗೆ ಕರೆದೊಯ್ದಿತ್ತು.
ಸಂಸೆ, ಹಿರೇಬೈಲು ಮತ್ತು ಇಡಕಿಣಿ ಸರ್ಕಾರಿ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರನ್ನು ಅರಣ್ಯ ಇಲಾಖೆಯು ಒಂದು ದಿನದ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು.ಶಿವಮೊಗ್ಗ ಸಮೀಪದ ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಭೇಟಿ ಕೊಟ್ಟ ಮಕ್ಕಳು ಹುಲಿ, ಸಿಂಹಗಳನು ಕಂಡು ರೋಮಾಂಚನ ಅನುಭವಿಸಿದರು.ಆನಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ವಿದ್ಯಾರ್ಥಿಗಳು ಭೇಟಿ ನೀಡಿದರು.

ನರಸಿಂಹರಾಜಪುರದ ಟ್ರೀ ಪಾರ್ಕಿಗೆ ಭೇಟಿ ಕೊಟ್ಟ ವಿದ್ಯಾರ್ಥಿಗಳ ತಂಡ ಅಲ್ಲಿ ಬೆಳೆಸಲಾಗುತ್ತಿರುವ ಬಗೆಬಗೆಯ ಗಿಡಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅರಣ್ಯ ಇಲಾಖೆಯ ದಿನೇಶ್, ಶಿವಕುಮಾರ್, ರಿಜ್ವಾನ್ ಮತ್ತು ರಾಕೇಶ್ ಮಕ್ಕಳ ತಂಡದ ಜೊತೆಗೆ ಹೋಗಿದ್ದರು.

