ಕಳಸ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತ ಶೇಖರಣಾ ಘಟಕ ಸ್ಥಾಪನೆ ಮಾಡಲು ಅನುಮೋದನೆ ಸಿಕ್ಕಿದೆ ಎಮದು ಶಾಸಕಿ ನಯನಾ ಮೋಟಮ್ಮ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶವಾದ ಕಳಸದಲ್ಲಿ ಹೆರಿಗೆ ಮತ್ತು ಅಪಘಾತದಂತಹ ಸಂದರ್ಭದಲ್ಲಿ ರಕ್ತದ ಕೊರತೆ ಕಂಡು ಬರುತ್ತಿತ್ತು.ಇದನ್ನು ಮನಗಂಡು ಕಳಸದಲ್ಲಿ ರಕ್ತ ಶೇಖರಣಾ ಘಟಕ ಸ್ಥಾಪಿಸುವಂತೆ ಆರೋಗ್ಯ ಇಲಾಖೆ ಗಮನ ಸೆಳೆಯಲಾಗಿತ್ತು.ಇದೀಗ ಘಟಕ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ ಎಂದು ಶಾಸಕಿ ಮಾಹಿತಿ ನೀಡಿದ್ದಾರೆ.
ರಕ್ಷ ಶೇಖರಣೆಗೆ ಬೇಕಾದ ಪರಿಕರಗಳು ಮತ್ತು ಸಿಬ್ಬಂದಿಯನ್ನು ಒದಗಿಸಲಾಗತ್ತಿದ್ದು ಜನವರಿಯಿಂದ ರಕ್ತ ಶೇಖರಣಾ ಘಟಕ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಸಕಾಲದಲ್ಲಿ ರಕ್ತ ಸಿಗದೆ ಪರದಾಟ ನಡೆಸಬೇಕಿದ್ದ ಸ್ಥಿತಿಯಿಂದ ರೋಗಿಗಳು ಹೊರಬರಲು ಈ ಘಟಕ ನೆರವಾಗಲಿದೆ ಎಂದೂ ನಯನಾ ಮೋಟಮ್ಮ ಮಾಹಿತಿ ನೀಡಿದ್ದಾರೆ.
