ಕಳಸ:ಲೋಕಾಯುಕ್ತ ಅಧಿಕಾರಿಗಳು ಪಟ್ಟಣದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಪಟ್ಟಣಕ್ಕೆ ನೀರು ಪೂರೈಸುವ ಹೊನ್ನೆಕಾಡು ಯೋಜನೆಯ ಅನುಷ್ಟಾನದಲ್ಲಿ ಆಗಿರುವ ಲೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎ.ಶ್ರೇಣಿಕ ಬುಧವಾರ ನಡೆದ ಲೋಕಾಯುಕ್ತ ಅಧಿಕಾರಿಗಳ ಸಭೆಯಲ್ಲಿ ಆಗ್ರಹಿಸಿದರು.
೭ ಕೋಟಿ ವೆಚ್ಚದ ಯೋಜನೆಯು ತಾಂತ್ರಿಕವಾಗಿ ವಿಫಲವಾಗಿದೆ.ನಿರೀಕ್ಷಿಸಿದಷ್ಟು ನೀರು ಕಳಸಕ್ಕೆ ಬರದೆ ಯೋಜನೆಗೆ ವೆಚ್ಚವಾದ ಹಣ ಪೋಲಾಗಿದೆ.ಈ ಬಗ್ಗೆ ಸಮಗ್ರ ತನಿಖೆ ನಡೆದು ಸಂಬAಧಪಟ್ಟವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದೂ ಶ್ರೇಣಿಕ ಒತ್ತಾಯಿಸಿದರು.
ಇದಕ್ಕೆ ದನಿ ಗೂಡಿಸಿದ ಕಳಸ ಪಂಚಾಯಿತಿ ಸದಸ್ಯ ವೀರೇಂದ್ರ, ಹೊನ್ನೆಕಾಡು ಯೋಜನೆಯು ಈವರೆಗೂ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಆಗಿಲ್ಲ.ಈಗಲೂ ಲಕ್ಷಂತರ ರೂಪಾಯಿ ವೆಚ್ಚ ಮಾಡಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್ಗಳು ನಿರ್ವಹಣೆ ಮಾಡಿಸುತ್ತಿರುವುದರ ಹಿಂದಿನ ಗುಟ್ಟು ಏನು ಎಂದು ಪ್ರಶ್ನಿಸಿದರು.
ಕೃಷಿ ಯಂತ್ರೋಪಕರಣಗಳಿಗೆ ಈಗ ಸರ್ಕಾರದ ಸಬ್ಸಿಡಿ ಇಲ್ಲದಿದ್ದರೂ ಸಬ್ಸಿಡಿ ದರದಲ್ಲಿ ಉಪಕರಣ ಮಾರುತ್ತಿರುವುದಾಗಿ ಸಂಸ್ಥೆಯೊAದು ಕಳಸದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಡಿ.ರಾಮಮೂರ್ತಿ ದೂರು ನೀಡಿದರು.
ಕಳಸದ ಹೊರವಲಯದಲ್ಲಿ ಸರ್ಕಾರದ ಭೂಮಿ ಕಬಳಿಸಿ ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ದಂಧೆ ನಡೆಯುತ್ತಿದೆ ಎಂದು ಕೃಷಿಕ ರಾಮಚಂದ್ರ ಹೆಬ್ಬಾರ್ ದೂರಿದರು.

ಸಿಪಿಐ ಮುಖಂಡರಾದ ಗೋಪಾಲ ಶೆಟ್ಟಿ ಮತ್ತು ಲಕ್ಷö್ಮಣಾಚಾರ್, ಕಂದಾಯ ಇಲಾಖೆಯು ಸರ್ವೆ ನಂಬರ್ ೪೩೪ರಲ್ಲಿ ಸಿರಿವಂತ ವ್ಯಕ್ತಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ.ಉಪವಿಭಾಗಾಧಿಕಾರಿಗಳ ಆದೇಶ ಇದ್ದರೂ ವಿವಾದಿತ ಭೂಮಿ ತೆರವು ಮಾಡುವಲ್ಲಿ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ದೂರಿದರು.
ಪಟ್ಟಣದ ಸರಹದ್ದಿನಲ್ಲೆ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿ ನೆಲ ಬಾಡಿಗೆಗೆ ನೀಡಿದ್ದರೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ.ಲಕ್ಷಾAತರ ಬೆಲೆ ಬಾಳುವ ಕಂದಾಯ ಇಲಾಖೆಯ ಅನೇಕ ಜಮೀನುಗಳು ಒತ್ತುವರಿ ಆಗಿದ್ದರೂ ಅಗತ್ಯ ಕ್ರಮ ವಹಿಸಿಲ್ಲ ಎಂದೂ ದೂರಿದರು.
ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನ ೨೩ ಸರ್ಕಾರಿ ನೌಕರರು ಅಕ್ರಮವಾಗಿ, ಬೇನಾಮಿಯಾಗಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಸಿಪಿಐ ಮುಖಂಡ ಕೆಳಗೂರು ರಮೇಶ್ ದೂರು ಸಲ್ಲಿಸಿದರು.
ಕಳಸ ಸರ್ಕಾರಿ ಆಸ್ಪತ್ರೆಯ ಎಕ್ಸ್ರೇ ತಂತ್ರಜ್ಞೆ ಬಡ ರೋಗಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ವೀರೇಂದ್ರ ಮತ್ತು ರಿಜ್ವಾನ್ ದೂರಿದರು.ಈ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಮಾತನಾಡಿ, ಕೆಲಸ ಮಾಡದ ಸಿಬ್ಬಂದಿಯನ್ನು ಯಾಕೆ ಇಲ್ಲಿ ಉಳಿಸಿಕೊಂಡಿದ್ದೀರಿ ಎಂದು ಆಸ್ಪತ್ರೆಯ ಆಡಳಿತ ವೈದ್ಯ ಮಧುಕುಮಾರ್ ಅವರನ್ನು ಪ್ರಶ್ನಿಸಿದರು. ಎಕ್ಸ್÷ರೇ ಸಿಬ್ಬಂದಿ ಬಗ್ಗೆ ಅನೇಕ ದೂರುಗಳು ಇದ್ದು ಅವರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಮಧುಕೂಮಾರ್ ಸ್ಪಷ್ಟನೆ ನೀಡಿದರು.
ಕ್ಯಾತನಮಕ್ಕಿಯ ನಿವಾಸಿ ಲಿಂಗಪ್ಪ ತನಗೆ ಮನೆ ಅನುದಾನ ಸಿಕ್ಕಿಲ್ಲ ಎಂದು ದೂರಿದರು. ಕಳಸದ ನೂರಾರು ವಸತಿರಹಿತರು ಕಳೆದ ೨೫ ವರ್ಷದಿಂದ ನಿವೇಶನಕ್ಕಾಗಿ ಕಾದಿದ್ದಾರೆ ಎಂದು ರಿಜ್ವಾನ್ ಗಮನ ಸೆಳೆದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್, ಕಂದಾಯ ಇಲಾಖೆ ಸಿಬ್ಬಂದಿ ಸುಧಾ, ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ, ಲೋಕಾಯುಕ್ತ ಸಿಬ್ಬಂದಿಗಳಾದ ಲೋಕೇಶ್, ವಿಜಯ ಭಾಸ್ಕರ್, ಸವಿನಯ್, ರವಿಚಂದ್ರ, ಚಂದನ್ ಇದ್ದರು.
